ಮೈಸೂರಿನ ಪ್ರಸಿದ್ಧ ಏಕಶಿಲಾ ನಂದಿ ವಿಗ್ರಹ ಬಿರುಕು ಬಿಟ್ಟಿದೆ. ಕಪ್ಪಾಗಿದ್ದ ನಂದಿ ವಿಗ್ರಹವನ್ನ ಕಳೆದ ವರ್ಷ ಪಾಲಿಶ್ ಮಾಡುವ ಮೂಲಕ ಹೊಸ ರೂಪ ಕೊಡಲಾಗಿತ್ತು. ಈ ಮೂಲಕ ಕಪ್ಪಾಗಿದ್ದ ವಿಗ್ರಹವನ್ನು ಬಿಳಿ ಬಣ್ಣಕ್ಕೆ ಪರಿವರ್ತನೆ ಮಾಡಲಾಗಿತ್ತು. ಇದರಿಂದಲೇ ಕೆಮಿಕಲ್ ಎಫೆಕ್ಟ್ ಆಗಿ ಈಗ ಗ್ರಹ ಬಿರುಕು ಬಿಟ್ಟಿದೆ ಎಂದು ಚಿಂತಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂದಿ ವಗ್ರಹ ಬಿರುಕು ಬಿಟ್ಟಿದ್ದರು, ಚಾಮುಂಡಿ ಬೆಟ್ಟದ ಆಡಳಿತ ಮಂಡಳಿ ಗಪ್ ಚುಪ್ ಆಗಿರುವುದಕ್ಕೆ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಾಮುಂಡಿ ಬೆಟ್ಟದ ಮೇನ್ ಅಟ್ರ್ಯಾಕ್ಷನ್ ಆಗಿರುವ ನಂದಿ ವಿಗ್ರಹ ಮೈಸೂರಿನ ಅರಸರ ಕಾಲದಲ್ಲಿ ನಿರ್ಮಾಣವಾಗಿತ್ತು.